Thursday, 28 July 2016

ನನ್ನ ಅಜ್ಜ - ಅಜ್ಜಿ..
ಬೇಸಿಗೆಯ ರಜ ಬಂದರೆ, ಅಜ್ಜಿ ಮನೆಯಲ್ಲಿ ಮಜ. ಸಾಗರ ಎಂದರೆ ಈಗಲೂ ಆ ಬೇಸಿಗೆ ರಜದಲ್ಲಿ ಕಳೆದ ಅಮೊಘ ಕ್ಷಣಗಳು ನೆನಪಾಗುತ್ತೆ. ಸಾಗರಕ್ಕೆ ಹೋದಾಗ ಆಯೀಯನ್ನೇ ಮರೆತು, ಅಜ್ಜಿ ಹಿಂದೆನೇ ಇಡೀ ದಿನ ಓಡಾಡ್ತಾ ಇರ್ತಿದ್ವಿ. ತಿಂಡಿಗೆ ತೊಟದಿಂದ ಎಲೆ ತೊಗೊಂಡು ಬರೊದು, ಅಜ್ಜಿ ಮಾಡಿದ್ದ ರುಚಿಕರ ತಿಂಡಿ ತಿನ್ನೊದು, ಸ್ನಾನ ಆದಮೆಲೆ ಅಜ್ಜಿ ಜೊತೆ ಹೊಗಿ ಭಾವಿ ಇಂದ ನೀರು ತರೊದು, ಪೂಜೆಗಾಗಿ ಹೂವು ಕೊಯ್ಯುವುದು, ಹೀಗೆ ಅಜ್ಜಿಯ ಜೊತೆನೇ ಯಾವಾಗ್ಲೂ.
ತೋಟದಲ್ಲಿ ಹೋಗಿ ನೆಲ್ಲಿಕಾಯಿ ಮರ ಹತ್ತೋದು, ಪೇರಲೆ ಗಿಡ ಹತ್ತೋದು, ನೆಲ್ಲಿ ಕಾಯಿ ಮತ್ತು ಪೇರಲೆ ಹಣ್ಣಿಗೆ ಅಡಿಗೆ ಮನೆಯಿಂದ ಉಪ್ಪು, ಖಾರದ ಪುಡಿ, ಬೆಲ್ಲ ಕದ್ದೊಯ್ದು ಹೊಗೊದು. "ಬೇಡ್ರೊ ಮರ ಹತ್ತ ಬೇಡ್ರೊ" ಅಂತ ಅದೆಷ್ಟು ಸಾರಿ ಅಜ್ಜಿ ಹತ್ರ ಬಯಿಸಿಕೊಂದಿವೊ. ಇಂಥಾ ಅಪೂರ್ವ ಕ್ಷಣಗಳು ನಮ್ಮ ಬೆಸಿಗೆ ರಜಗಳ ದಿನಚರಿಯೇ ಆಗಿತ್ತು.
ದಿನಾ ರಾತ್ರಿ ಅವಳ ಕಥೆ ಕೇಳದೆ ಮಲಗೋದಿಲ್ಲ ಅಂತ ಹಠ ಮಾಡಿ ಕಥೆ ಕೇಳೋದು. ನಾ ಮೊದಲು ತಾ ಮೊದಲು ಅಂತ ಅವಳ ತೊಡೆಯಮೇಲೆ ಮಲಗಲು ನಾನು ವಿಭಾ ಜಗಳ ಆಡೊದು. ಹೀಗೆ ಅಜ್ಜಿ ಜೊತೆ ಕಳೆದ ಎಲ್ಲಾ ದಿನಗಳೂ ಮಜವೋ ಮಜ. ಇವೆಲ್ಲ ಬಾಲ್ಯ ದಿನಗಳ ನೆನಪು.
ನಾಲ್ಕಾರು ವರ್ಶಗಳ ನಂತರ, ನಂಜನಗೂಡಿಗೆ ಅಜ್ಜಿ ಬಂದಾಗ ಅವಳ ನಾನಾ ರೂಪಗಳನ್ನು ನಾ ನೊಡಿದೆ. ಎಂದೂ ದಣಿಯದ ಉತ್ಸಾಹ, ಮಕ್ಕಳು ಮೊಮ್ಮಕ್ಕಳ ಏಳಿಗೆಯಲ್ಲಿ ಅವಳು ಕಾಣುತ್ತಿದ್ದ ಖುಶಿ, ಹೊಸ ವಿಷಯಗಳನ್ನು ಕಲಿಯಲು ಅವಳು ತೊರುತ್ತಿದ್ದ ಹುಮ್ಮಸ್ಸು, ಮಾಡರ್ನ್ ಪಧ್ಧತಿಗಳನ್ನು ಅರ್ಥ ಮಾಡಿಕೊಳ್ಳುವ ಹೃದಯ ವೈಶಾಲ್ಯತೆ ಇವೆಲ್ಲ ಕಂಡು, ನನ್ನ ಅಜ್ಜಿಯಲ್ಲಿ ನಾನು ಒಬ್ಬ ಆದರ್ಶ ಮಹಿಳೆಯನ್ನು ಕಂಡೆ. ಅಜ್ಜಿಯ ಸ್ಪುರದ್ರೂಪಿ ನಗು ಇರಬಹುದು, ಆ ನಗುವಿನಲ್ಲಿರುವ ತೆಜಸ್ಸು ಇರಬಹುದು, ಎಲ್ಲರ ಮನ ಗೆಲ್ಲುವ ಅವಳ ವ್ಯಕ್ತಿತ್ವವು ಆಕರ್ಷಕವಾಗಿತ್ತು.
ಕೆಲವು ಅಜ್ಜೋಬಾನ ನೆನಪುಗಳು ಕೂಡಾ ಇಲ್ಲಿ ಬಿಚ್ಚಿಡುತ್ತೇನೆ. ಅಜ್ಜೋಬಾನ ಮೈಕಟ್ಟು, ಅವರ ಮಾತಾಡುವ ಶೈಲಿ ನನಗೆ ಬಹಲ ಇಶ್ಟವಾಗುತ್ತಿತ್ತು. ಮಿಲಿಟರಿಯವರ ಹಾಗೆ ದಿಸಿಪ್ಲಿನ್ ಇತ್ತು ಆದರೆ ಬೆಣ್ಣೆಯಂತಹ ಹೃದಯದವರು. ಅವರ ಠೀವಿಯಲ್ಲಿಯೇ ಅವರ ಮೇಲೆ ಗೌರವ ಭಾವನೆ ಹುಟ್ಟುತ್ತಿತ್ತು. ಹಾಗೆಯೇ ಸ್ತ್ರೈಟ್ ಫ಼ಾರವರ್ಡ್ ವ್ಯಕ್ತಿತ್ವ ಅವರದು. ಅವರು ಇಸ್ಪೀಟ್ ಆಟದಲ್ಲೂ ಧುರೀಣರು. ನಮ್ಮ ಫ಼್ಯಾಮಿಲಿ ಇಸ್ಪೀಟ್ ಆಟದಲ್ಲಿ ಅವರನ್ನು ಯಾರಿಂದಲೂ ಸೊಲಿಸಲಿಕ್ಕೆ ಆಗುತ್ತಿರಲಿಲ್ಲ ಎಂಬುದು ನನಗೆ ನೆನಪಿದೆ.
ಅಜ್ಜೋಬಾ ದಿಲ್ಲಿಗೆ ಬಂದಾಗಿನ ಒಂದು ಘಟನೆ ಇಲ್ಲಿ ನೆನಪಾಗುತ್ತಿದೆ. ನನಗೆ "ಓಂ ಜೈ ಜಗದೀಶ ಹರೇ" ಎಂಬ ಹಾಡಿನ ಸಾಲುಗಲನ್ನು ಹೇಳಿಕೊಟ್ಟಿದ್ದು. ಆ ಹಾಡಿನ ಪಲ್ಲವಿಯಲ್ಲಿ "ಭಕ್ತ ಜನೋಂಕೆ ಸಂಕಟ, ಕ್ಷಣಮೆ ದೂರ ಕರೆ" ಎಂದು ಬರುತ್ತದೆ. ಆ ಸಾಲುಗಳನ್ನು ಹಾಡುತ್ತಾ ಅಜ್ಜೋಬಾ (ನನ್ನ ಅಜ್ಜ) ನಮಗೆ ಹೇಳಿದ್ದರು - ನಾವು ಭಕ್ತರಾಗಿ ದೆವರ ಬಳಿ ಹೋದಲ್ಲಿ, ದೇವರು ನಮ್ಮನ್ನು ಎಲ್ಲ ತೊಂದರೆಗಳಿಂದ ಪಾರು ಮಾಡುತ್ತಾನೆ ಎಂದು. ಕಷ್ಟಗಳು ಬಂದಾಗ ಚಿಂತಿಸಬಾರದು. ದೇವರಲ್ಲಿ ನಂಬಿಕೆ ಇಟ್ಟರೆ ಎಂತಹ ಕಷ್ಟಕರ ಕಾರ್ಯ ಕೂಡ ಸಫಲ ಆಗತ್ತೆ ಎಂದು. ಇಂತಹ ಅಣಿ ಮುತ್ತೊಂದನ್ನು ಅಜ್ಜೋಬಾ ನಿಂದ ಪಡೆದೆ ಎಂದು ಧನ್ಯ ಎನಿಸುತ್ತದೆ.
ಅಜ್ಜಿಯ ಸೀರೆ ಮಡಿಚಲು ಆಗದು, ಅಜ್ಜನ ಕಾಸು ಎಣಿಸಲು ಆಗದು ಅಂತ ಒಂದು ಗಾದೆ ಇದೆ. ನನ್ನ ಅಜ್ಜಿ-ಅಜ್ಜ ಬಗ್ಗೆ ಈ ಗಾದೆ ಹೆಳುವುದಾದರೆ ನಾನು ಹೀಗೆ ಹೆಳುವೆ - ನನ್ನ ಅಜ್ಜಿಯ ಪ್ರೀತಿ ಎಣಿಸಲು ಆಗದು, ನನ್ನ ಅಜ್ಜನ ಭಕ್ತಿ ಮಡಿಚಲು ಆಗದು.